Tallest Monolithic Ganesha Statue To Unveile At Nagawara Shortly | Bengaluru | Public TV

Public TV 2022-08-31

Views 5

ಬೆಂಗಳೂರಿನ ನಾಗವಾರದಲ್ಲಿ ಸರಿಸುಮಾರು 32 ವರ್ಷಗಳಿಂದ 32 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನ ಪ್ರತಿಸ್ಥಾಪಿಸೋ ಕಾರ್ಯಕ್ಕೆ ಗ್ರಾಮದ ಜನರು ಭಕ್ತರು ಮುಂದಾಗಿದ್ರು. ದೊಡ್ಡಬಳ್ಳಾಪುರದಿಂದ 60 ದಿನಗಳ ಕಾಲ ಬೃಹತ್ ಏಕ ಶಿಲೆಯನ್ನ ತಂದು ಗಣಪತಿಯ ವಿಗ್ರಹದ ಕೆತ್ತನೆ ಶುರು ಮಾಡಿದ್ರು.. ನಾನಾ ಕಾರಣಗಳಿಂದ ಕುಂಟುತ್ತ ತೆವಳುತ್ತಾ ಸಾಗಿದ್ದು ಖ್ಯಾತ ವರ್ಣ ಚಿತ್ರಗಾರ ಬಿ.ಕೆ.ಎಸ್ ವರ್ಮ ಪರಿಕಲ್ಪನೆಯ ಗಣಪತಿಯ ವಿಗ್ರಹಕ್ಕೆ ಅಂತಿಮ ರೂಪ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಈ ಬೃಹತ್ ಗಣಪತಿಯ ವಿಗ್ರಹ ಲೋಕಾರ್ಪಣೆ ಆಗಲಿದೆ. ಇದು ಅತ್ಯಂತ ಎತ್ತರದ ಏಕಶಿಲಾ ಗಣಪತಿಯ ವಿಗ್ರಹವಾಗಿದ್ದು, ಪೀಠದಿಂದ ಒಟ್ಟು 42 ಅಡಿ ಎತ್ತರ ಇರಲಿದೆ. ಅಲ್ಲದೇ ವಿಗ್ರಹದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ವಿಗ್ರಹವೂ ಇದೆ. ಮುಂದೆ ಇದು ಅತ್ಯಂತ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಲಿದೆ ಅಂತಿದ್ದಾರೆ ಸ್ಥಳೀಯರು

#publictv #ganeshstatue #bengaluru

Share This Video


Download

  
Report form
RELATED VIDEOS